ದಿ ಡಿಪಾರ್ಟೆಡ್ ೨೦೦೬ರಲ್ಲಿ ತೆರೆಕಂಡ ಆಂಗ್ಲ ಚಲನಚಿತ್ರ. ವಿಲಿಯಂ ಮೊನಹನ್ ಅವರ ಚಿತ್ರಕಥೆಗೆ ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶಿಸಿದ್ದಾರೆ . ಇದು ೨೦೦೨ರ ಹಾಂಕಾಂಗ್ ಚಲನಚಿತ್ರ ಇಂಟರ್ನಲ್ ಅಫ಼ೆರ್ಸ್ ನ ರೀಮೇಕ್ ಚಿತ್ರವಾಗಿದೆ. ಈ ಚಿತ್ರವು ಬಹಳ ಉತ್ತಮ ವಿಮರ್ಶೆಗಳನ್ನು ಪಡೆದು ಬಾಕ್ಸ್ ಆಫೀಸ್ನಲ್ಲಿ $ 289.8 ದಶಲಕ್ಷದಷ್ಟು ಹಣವನ್ನು ಗಳಿಸಿತು ಹಾಗೂ ನಾಲ್ಕು ಅಕಾಡೆಮಿ ಪ್ರಶಸ್ತಿಗಳನ್ನು ಸಹ ಗೆದ್ದಿತು == ಕಥಾವಸ್ತು == ಕಥೆಯು ಬಾಸ್ಟನ್ನಲ್ಲಿ ನಡೆಯುತ್ತದೆ. ಐರಿಶ್ ಮಾಬ್ ಬಾಸ್(ಡಾನ್) ಫ್ರಾನ್ಸಿಸ್ "ಫ್ರಾಂಕ್" ಕಾಸ್ಟೆಲ್ಲೋ (ನಿಕೋಲ್ಸನ್) ಮಸ್ಸಾಚ್ಯುಸೆಟ್ಸ್ ಸ್ಟೇಟ್ ಪೊಲೀಸ್ ಪಡೆಯಲ್ಲಿ ತನ್ನ ಮಗನಂತಿದ್ದ ಕೋಲಿನ್ ಸುಲೀವಾನ್ (ಮ್ಯಾಟ್ ಡ್ಯಾಮನ್) ಅನ್ನು ಇರಿಸುತ್ತಾನೆ;ಅದೇ ಸಮಯದಲ್ಲಿ ಪೋಲೀಸ್ ಕೂಡ ತಮ್ಮ ಕಡೆಯವನಾದ ವಿಲಿಯಂ "ಬಿಲ್ಲಿ" ಕೋಸ್ಟಿಗನ್ (ಲಿಯೊನಾರ್ಡೊ ಡಿಕಾಪ್ರಿಯೊ) ಅನ್ನು ಕಾಸ್ಟೆಲ್ಲೋ ಕಡೆಯವರ ಪೈಕಿಯಲ್ಲಿ ಸೇರಿಸುತ್ತಾರೆ. ಕೋಲಿನ್ ಮತ್ತು ವಿಲಿಯಂ ಇಬ್ಬರು ಈ ಸ್ಥಿತಿಯನ್ನು ಅರಿತಾಗ ,ಇತರು ಅವರಿಬ್ಬರನ್ನು ಗೂಡಾಚಾರಿಯೆಂದು ಕಂಡುಹಿಡಿಯುವ ಮೊದಲು ,ಇವರಿಬ್ಬರೆ ಗುರುತನ್ನು ಪತ್ತೆಹಚ್ಚುವ ಪ್ರತಿ ಪ್ರಯತ್ನವನ್ನೂ ಮಾಡುತ್ತಾರೆ. == ಪಾತ್ರವರ್ಗ == === ಬಾಕ್ಸ್ ಆಫೀಸ್ === $ 90 ಮಿಲಿಯನ್ ಬಜೆಟ್ನ ಈ ಚಿತ್ರವು, ಅಮೆರಿಕಾ ಮತ್ತು ಕೆನೆಡಾದಲ್ಲಿ $132.4ಮಿಲಿಯನ್ ಗಳಿಸಿತು. ಒಟ್ಟಾರೆಯಾಗಿ ವಿಶ್ವಾದ್ಯಾಂತ $291.5 ಮಿಲಿಯನ್ ಗಳಿಕೆಯನ್ನು ಮಾಡಿತು. == ಟಿಪ್ಪಣಿಗಳು == == ಬಾಹ್ಯ ಕೊಂಡಿಗಳು == ದಿ ಡಿಪಾರ್ಟೆಡ್ ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ದಿ ಡಿಪಾರ್ಟೆಡ್